ಕ್ರಿಕೆಟ್

2019 ಐಪಿಎಲ್ ಫೈನಲ್ : ಸಿಎಸ್ ಕೆ, ಮುಂಬೈ ಇಂಡಿಯನ್ಸ್ ನಡುವಣ ' ಮಹಾ ಕಾಳಗ'

ಸುಮಾರು ಎರಡು ತಿಂಗಳುಗಳಷ್ಟು ಕಾಲ ಸುದೀರ್ಘ ಕಾಲ ನಡೆದಿರುವ ಐಪಿಎಲ್ 2019ನೇ ಸಾಲಿನ ಟ್ವೆಂಟಿ-20 ಕ್ರಿಕೆಟ್ ಚಾಂಪಿಯನ್‌ಶಿಪ್‌ ಫೈನಲ್ ಪಂದ್ಯಕ್ಕೆ ವೇದಿಕೆ ಸಿದ್ಧಗೊಂಡಿದೆ.

2019 ಐಪಿಎಲ್ ಫೈನಲ್ : ಸಿಎಸ್ ಕೆ, ಮುಂಬೈ ಇಂಡಿಯನ್ಸ್ ನಡುವಣ ' ಮಹಾ ಕಾಳಗ'
ಧೋನಿ, ರೋಹಿತ್ ಶರ್ಮಾ
Published On :

ಹೈದರಾಬಾದ್: ಸುಮಾರು ಎರಡು ತಿಂಗಳುಗಳಷ್ಟು ಕಾಲ ಸುದೀರ್ಘ ಕಾಲ ನಡೆದಿರುವ  ಐಪಿಎಲ್  2019ನೇ ಸಾಲಿನ ಟ್ವೆಂಟಿ-20 ಕ್ರಿಕೆಟ್ ಚಾಂಪಿಯನ್‌ಶಿಪ್‌  ಫೈನಲ್ ಪಂದ್ಯಕ್ಕೆ ವೇದಿಕೆ ಸಿದ್ಧಗೊಂಡಿದೆ.

ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ಭಾನುವಾರ ಸಂಜೆ ಮುಂಬೈ ಇಂಡಿಯನ್ಸ್  ಹಾಗೂ  ಚೆನ್ನೈ ಸೂಪರ್ ಕಿಂಗ್ಸ್ ನಡುವಣ ಮಹಾ ಕಾಳಗ ನಡೆಯಲಿದೆ.

ಕಳೆದ ಸೋಮವಾರ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಚೆನ್ನೈ ತಂಡವನ್ನೇ ಮಣಿಸಿರುವ ಮುಂಬೈ ಫೈನಲ್  ತಲುಪಿತ್ತು.  ಅತ್ತ ಎರಡನೇ ಕ್ವಾಲಿಫೈಯರ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮಣಿಸಿರುವ ಚೆನ್ನೈ ಫೈನಲ್‌ಗೆ ಲಗ್ಗೆಯಿಟ್ಟಿದ್ದು, ಸೇಡು ತೀರಿಸಿಕೊಳ್ಳುವ ತವಕದಲ್ಲಿದೆ.

ಉಭಯ ತಂಡಗಳು  ನಾಲ್ಕನೇ ಬಾರಿಗೆ ಐಪಿಎಲ್‌ ಫೈನಲ್‌ನಲ್ಲಿ ಮುಖಾಮುಖಿಯಾಗಿದ್ದು, ಮುಂಬೈ 2-1ರ ಅಂತರದ ಮುನ್ನಡೆ ಕಾಯ್ದುಕೊಂಡಿದೆ. ಒಟ್ಟಾರೆಯಾಗಿ ಚೆನ್ನೈಗಿದು ಎಂಟನೇ ಹಾಗೂ ಮುಂಬೈಗೆ ಐದನೇ ಐಪಿಎಲ್ ಫೈನಲ್ ಆಗಿದೆ.

ಮುಂಬೈ ಹಾಗೂ ಚೆನ್ನೈ ತಂಡಗಳು ತಲಾ ಮೂರು ಬಾರಿ ಕಿರೀಟವನ್ನು ಎತ್ತಿ ಹಿಡಿದಿದೆ. ಹಾಗಾಗಿ ದಾಖಲೆಯ ನಾಲ್ಕನೇ ಬಾರಿಗೆ ವಿಜಯಲಕ್ಷ್ಮೀ ಯಾರಿಗೆ ಒಲಿಯಲಿದ್ದಾರೆಂಬುದನ್ನುಕಾದು ನೋಡಬೇಕಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.